ಪಿಯರೆ ಕ್ಯೂರಿ(ಮೇ ೧೫, ೧೮೫೯ – ಎಪ್ರಿಲ್ ೧೯, ೧೯೦೬) ಫ್ರಾನ್ಸ್‌ನ ವಿಜ್ಞಾನಿ.ಮುಖ್ಯವಾಗಿ ವಿಕಿರಣ ಕ್ಷೇತ್ರದಲ್ಲಿ ಹೆಚ್ಚಿನ ಕೆಲಸ ಮಾಡಿದ್ದಾರೆ. ಇವರು ತಮ್ಮ ಪತ್ನಿ ಮೇರಿ ಕ್ಯೂರಿಯವರೊಂದಿಗೆ ರೇಡಿಯಮ್ ಹಾಗೂ ಪೊಲೊನಿಯಮ್ ಎಂಬ ಎರಡು ಮೂಲಧಾತುಗಳನ್ನು ಕಂಡುಹಿಡಿದಿದ್ದಾರೆ.ಇವರಿಗೆ ತಮ್ಮ ಪತ್ನಿಯೊಂದಿಗೆ ೧೯೦೩ ರಲ್ಲಿ ಭೌತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ದೊರೆಯಿತು. ಪಿಯರೆ ಕ್ಯೂರಿ ಪ್ಯಾರಿಸ್‌ನಲ್ಲಿ ಜನಿಸಿದರು.ಇಲ್ಲಿಯೇ ವಿದ್ಯಾಭ್ಯಾಸ ಪೂರೈಸಿ ಪ್ಯಾರಿಸ್ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರವನ್ನು ಭೋಧಿಸಿದರು.ಇವರು ಲೋಹಗಳ ಕಾಂತತ್ವದ ಬಗ್ಗೆ ವಿಶೇಷ ಸಂಶೋಧನೆ ಮಾಡಿದವರು.೧೯೦೬ ರಲ್ಲಿ ನಿಧನರಾದರು. == ಬಾಹ್ಯ ಸಂಪರ್ಕಗಳು == .: 2013-06-02 ವೇಬ್ಯಾಕ್ ಮೆಷಿನ್ ನಲ್ಲಿ. ' 2004-09-02 ವೇಬ್ಯಾಕ್ ಮೆಷಿನ್ ನಲ್ಲಿ. 2004-09-02 ವೇಬ್ಯಾಕ್ ಮೆಷಿನ್ ನಲ್ಲಿ. 2015-02-16 ವೇಬ್ಯಾಕ್ ಮೆಷಿನ್ ನಲ್ಲಿ. 2006-08-28 ವೇಬ್ಯಾಕ್ ಮೆಷಿನ್ ನಲ್ಲಿ. ' 2007-10-20 ವೇಬ್ಯಾಕ್ ಮೆಷಿನ್ ನಲ್ಲಿ.